ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2026ರಲ್ಲಿ 82 ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ವ್ಯವಸ್ಥಾಪಕರು, 2ನೇ ದರ್ಜೆ ಸಹಾಯಕ, ವಾಹನ ಚಾಲಕ ಮತ್ತು ಕಿರಿಯ ಸೇವಕ ಹುದ್ದೆಗಳಿಗೆ June 30, 2026 ರೊಳಗೆ Online ಅರ್ಜಿ ಸಲ್ಲಿಸಿ. ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಸಂಪೂರ್ಣ ವಿವರ ಇಲ್ಲಿ ಓದಿ.
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೇಮಕಾತಿ 2026 – 82 ಹುದ್ದೆಗಳು | ಸಂಪೂರ್ಣ ಮಾಹಿತಿ
ಬ್ಯಾಂಕ್ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ದೊಡ್ಡ ಅವಕಾಶ. ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಹೊಸಪೇಟೆ ಇವರು ದಿನಾಂಕ 01.06.2026 ರಂದು ಒಟ್ಟು 82 ಹುದ್ದೆಗಳಿಗೆ ಪರಿಷ್ಕೃತ ನೇಮಕಾತಿ ಪ್ರಕಟಣೆ ಹೊರಡಿಸಿದ್ದಾರೆ. ಅರ್ಹ ಅಭ್ಯರ್ಥಿಗಳು 01.06.2026 ರಿಂದ 30.06.2026 ರೊಳಗೆ Online ಮೂಲಕ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಸರ್ಕಾರದ ಮಾನ್ಯ ಸಹಕಾರ ಸಂಘಗಳ ಅಪರ ನಿಬಂಧಕರ ಪೂರ್ಣ ಅನುಮೋದನೆ ಪಡೆದ ಈ ನೇಮಕಾತಿಯಲ್ಲಿ ನಾಲ್ಕು ಬೇರೆ ಬೇರೆ ವಿಧದ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಈ ಲೇಖನದಲ್ಲಿ ಹುದ್ದೆಗಳ ವಿವರ, ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಸಂಸ್ಥೆ ಮತ್ತು ನೇಮಕಾತಿ ಸಾರಾಂಶದ ಸಂಪೂರ್ಣ ಮಾಹತಿ
Recruitment Notification-2026 https://drive.google.com/file/d/1i9RP_SkdFFicawHoXqowtN4kjMB-Y5-p/view?usp=sharing
| ವಿಷಯ | ವಿವರ |
|---|---|
| ಸಂಸ್ಥೆ | ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಹೊಸಪೇಟೆ |
| ಒಟ್ಟು ಹುದ್ದೆಗಳು | 82 |
| ಅರ್ಜಿ ಪ್ರಾರಂಭ | 01.06.2026 |
| ಅರ್ಜಿ ಕೊನೆ ದಿನ | 30.06.2026 |
| ಅರ್ಜಿ ವಿಧಾನ | Online ಮಾತ್ರ |
| ವೆಬ್ಸೈಟ್ | www.bellarydcc.bank.in |
ಹುದ್ದೆಗಳ ಸಂಪೂರ್ಣ ವಿವರ
ಈ ನೇಮಕಾತಿಯಲ್ಲಿ ಒಟ್ಟು 4 ವಿಧದ ಹುದ್ದೆಗಳಿವೆ. ಅವುಗಳ ಸಂಖ್ಯೆ ಮತ್ತು ವೇತನ ಶ್ರೇಣಿ ಈ ಕೆಳಗಿನಂತಿದೆ.
1. ವ್ಯವಸ್ಥಾಪಕರು / ಪ್ರಥಮ ದರ್ಜೆ ಸಹಾಯಕರು – 22 ಹುದ್ದೆಗಳು
ಈ ಹುದ್ದೆ ಬ್ಯಾಂಕ್ನ ಪ್ರಮುಖ ಆಡಳಿತ ಮಟ್ಟದ ಹುದ್ದೆಯಾಗಿದ್ದು, ಒಟ್ಟು 22 ಖಾಲಿ ಸ್ಥಾನಗಳಿವೆ.
ವೇತನ ಶ್ರೇಣಿ: ರೂ.44,425 – 83,700 (ಅನೇಕ ಹಂತಗಳ ವೇತನ ಬಡ್ತಿ ಸೇರಿ)
ಮೀಸಲಾತಿ ವಿಂಗಡಣೆ:
- ಕಲ್ಯಾಣ ಕರ್ನಾಟಕ ಸ್ಥಳೀಯ ವ್ಯಂದ (371ಜೆ): 18 ಹುದ್ದೆ
- ಕಲ್ಯಾಣ ಕರ್ನಾಟಕ ಸ್ಥಳೀಯೇತರ ವ್ಯಂದ: 4 ಹುದ್ದೆ
ಸಾಮಾನ್ಯ, ಮಹಿಳಾ, ಗ್ರಾಮೀಣ, ಮಾಜಿ ಸೈನಿಕ, ಕನ್ನಡ ಮಾಧ್ಯಮ, ಯೋಜನೆ ನಿರಾಶ್ರಿತ ಮತ್ತು ವಿಕಲ ಚೇತನ ವರ್ಗಗಳಿಗೆ ಮೀಸಲಾತಿ ಆಧಾರದಲ್ಲಿ ಹಂಚಿಕೆ ಮಾಡಲಾಗಿದೆ.
2. ದ್ವಿತೀಯ ದರ್ಜೆ ಸಹಾಯಕರು – 28 ಹುದ್ದೆಗಳು
ಬ್ಯಾಂಕ್ನಲ್ಲಿ ದೈನಂದಿನ ಕಾರ್ಯ ನಿರ್ವಹಿಸಲು ಅಗತ್ಯವಾದ ಹುದ್ದೆ. ಒಟ್ಟು 28 ಖಾಲಿ ಸ್ಥಾನಗಳಿವೆ.
ವೇತನ ಶ್ರೇಣಿ: ರೂ.34,100 – 67,600 (ಅನೇಕ ಹಂತಗಳ ವೇತನ ಬಡ್ತಿ ಸೇರಿ)
ಮೀಸಲಾತಿ ವಿಂಗಡಣೆ:
- ಕಲ್ಯಾಣ ಕರ್ನಾಟಕ ಸ್ಥಳೀಯ ವ್ಯಂದ (371ಜೆ): 22 ಹುದ್ದೆ
- ಕಲ್ಯಾಣ ಕರ್ನಾಟಕ ಸ್ಥಳೀಯೇತರ ವ್ಯಂದ: 6 ಹುದ್ದೆ
3. ವಾಹನ ಚಾಲಕರು – 1 ಹುದ್ದೆ
ಬ್ಯಾಂಕ್ನ ವಾಹನ ಚಾಲನೆ ಜವಾಬ್ದಾರಿ ನಿರ್ವಹಿಸಲು ಒಂದು ಹುದ್ದೆ ಇದೆ.
ವೇತನ ಶ್ರೇಣಿ: ರೂ.31,775 – 61,300 (ಅನೇಕ ಹಂತಗಳ ವೇತನ ಬಡ್ತಿ ಸೇರಿ)
ಈ ಹುದ್ದೆ ಕಲ್ಯಾಣ ಕರ್ನಾಟಕ ಸ್ಥಳೀಯ ವ್ಯಂದ (371ಜೆ) ಮೀಸಲಾತಿ ಅಡಿಯಲ್ಲಿದೆ.
4. ಕಿರಿಯ ಸೇವಕರು – 31 ಹುದ್ದೆಗಳು
ಈ ನೇಮಕಾತಿಯಲ್ಲಿ ಅತಿ ಹೆಚ್ಚು ಹುದ್ದೆ ಇರುವ ವರ್ಗ. ಒಟ್ಟು 31 ಹುದ್ದೆಗಳಿದ್ದು, SSLC ಉತ್ತೀರ್ಣರಿಗೆ ಸೂಕ್ತ.
ವೇತನ ಶ್ರೇಣಿ: ರೂ.29,600 – 52,800 (ಅನೇಕ ಹಂತಗಳ ವೇತನ ಬಡ್ತಿ ಸೇರಿ)
ಮೀಸಲಾತಿ ವಿಂಗಡಣೆ:
- ಕಲ್ಯಾಣ ಕರ್ನಾಟಕ ಸ್ಥಳೀಯ ವ್ಯಂದ (371ಜೆ): 26 ಹುದ್ದೆ
- ಕಲ್ಯಾಣ ಕರ್ನಾಟಕ ಸ್ಥಳೀಯೇತರ ವ್ಯಂದ: 5 ಹುದ್ದೆ
ಶೈಕ್ಷಣಿಕ ಅರ್ಹತೆ
ಪ್ರತಿ ಹುದ್ದೆಗೆ ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಕೆಳಗಿನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವ್ಯವಸ್ಥಾಪಕರು / ಪ್ರಥಮ ದರ್ಜೆ ಸಹಾಯಕರು:
- ಭಾರತದ ಮಾನ್ಯ ವಿಶ್ವವಿದ್ಯಾಲಯದ ಯಾವುದೇ ಪದವಿ ಕೋರ್ಸ್ನಲ್ಲಿ ತೇರ್ಗಡೆ ಹೊಂದಿರಬೇಕು
- ಕನ್ನಡ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು. ಕನ್ನಡ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರಬೇಕು
- ಕಂಪ್ಯೂಟರ್ ನಿರ್ವಹಣೆ ಬಗ್ಗೆ ತಿಳಿವಳಿಕೆ ಇರಬೇಕು
ದ್ವಿತೀಯ ದರ್ಜೆ ಸಹಾಯಕರು ಶೈಕ್ಷಣಿಕ ಅರ್ಹತೆ:
- ಮಾನ್ಯ ಶಿಕ್ಷಣ ಸಂಸ್ಥೆಯಿಂದ ದ್ವಿತೀಯ PUC (12ನೇ ತರಗತಿ) ಅಥವಾ ಸಮಕ್ಕೆ ಸಮಾನ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು
- ಕನ್ನಡ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ಸ್ಪಷ್ಟವಾಗಿ ಬರಬೇಕು
- ಕಂಪ್ಯೂಟರ್ ನಿರ್ವಹಣೆ ಬಗ್ಗೆ ತಿಳಿವಳಿಕೆ ಇರಬೇಕು
ವಾಹನ ಚಾಲಕರು ಶೈಕ್ಷಣಿಕ ಅರ್ಹತೆ:
- SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು
- ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು
- ಕಾನೂನುಬದ್ಧ ಡ್ರೈವಿಂಗ್ ಲೈಸೆನ್ಸ್ ಹೊಂದಿರಲೇಬೇಕು
ಕಿರಿಯ ಸೇವಕರು ಶೈಕ್ಷಣಿಕ ಅರ್ಹತೆ:
- SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು
- ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು
ಮುಖ್ಯ ಸೂಚನೆ: ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರಿಚಯ ಅತ್ಯಾವಶ್ಯಕ.
ವಯೋಮಿತಿ
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
| ವರ್ಗ | ಗರಿಷ್ಠ ವಯಸ್ಸು |
|---|---|
| SC / ST / ಪರಿಶಿಷ್ಟ ಪಂಗಡ / ಪ್ರವರ್ಗ-1 | 40 ವರ್ಷ |
| ಇತರ ಹಿಂದುಳಿದ ವರ್ಗ (2A, 2B, 3A, 3B) | 38 ವರ್ಷ |
| ಸಾಮಾನ್ಯ ಮತ್ತು ಉಳಿದ ಎಲ್ಲಾ ಅಭ್ಯರ್ಥಿಗಳು | 35 ವರ್ಷ |
ವಯೋಮಿತಿ ಸಡಿಲಿಕೆ ಪ್ರಕರಣಗಳು:
- ಮಾಜಿ ಸೈನಿಕರಿಗೆ: ಸರ್ಕಾರದ ನಿಯಮದಂತೆ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವಧಿಗೆ ಹೆಚ್ಚುವರಿ ವಯೋಮಿತಿ ನೀಡಲಾಗುತ್ತದೆ
- ವಿಕಲ ಚೇತನ ಅಭ್ಯರ್ಥಿಗಳಿಗೆ: 10 ವರ್ಷ ಹೆಚ್ಚುವರಿ
- ವಿಧವೆ ಮಹಿಳಾ ಅಭ್ಯರ್ಥಿಗಳಿಗೆ: 10 ವರ್ಷ ಹೆಚ್ಚುವರಿ (ತಾವು ವಿಧವೆ ಎಂದು ಮತ್ತು ಮರು ಮದುವೆಯಾಗಿಲ್ಲ ಎಂದು ತಹಶೀಲ್ದಾರ್ ಪ್ರಮಾಣ ಪತ್ರ ಅಪ್ಲೋಡ್ ಮಾಡಬೇಕು)
- ಒಂದು ಬಾರಿ ಕ್ರಮ (One Time Measure): ಸರ್ಕಾರದ ಆದೇಶ ಸಂಖ್ಯೆ: ಸಿ.ಆ.ಸು.ಇ:2062:ಸೇನೆ 2025, ದಿ: 29.01.2026 ರಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ ಕ್ರಮವಾಗಿ 5 ವರ್ಷ ಸಡಿಲಿಕೆ ನೀಡಲಾಗಿದೆ
ಮುಖ್ಯ: ದಿನಾಂಕ 06.04.2026 ರ ನೇಮಕಾತಿ ಪ್ರಕಟಣೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ವಯೋಮಿತಿ ಸಡಿಲಿಕೆ ಬಳಸಿಕೊಂಡ ಅಭ್ಯರ್ಥಿಗಳಿಗೆ ಪ್ರಸ್ತುತ ಪ್ರಕಟಣೆಯಲ್ಲಿ ವಯೋಮಿತಿ ದಿನಾಂಕ 30.06.2026 ಕ್ಕೆ ಇದ್ದಂತೆ ಪರಿಗಣಿಸಲಾಗುತ್ತದೆ.
ಅರ್ಜಿ ಶುಲ್ಕದ ಮಾಹಿತಿ
| ವರ್ಗ | ಅರ್ಜಿ ಶುಲ್ಕ |
|---|---|
| ಸಾಮಾನ್ಯ / ಇತರ ಹಿಂದುಳಿದ ವರ್ಗ (2A, 2B, 3A, 3B) | ₹1,000 + ಗೇಟ್ವೇ ಶುಲ್ಕ |
| SC / ST / ಪರಿಶಿಷ್ಟ ಪಂಗಡ / ಪ್ರವರ್ಗ-1 / ವಿಕಲ ಚೇತನ / ಮಾಜಿ ಸೈನಿಕ | ₹500 + ಗೇಟ್ವೇ ಶುಲ್ಕ |
ಶುಲ್ಕ ಪಾವತಿ ವಿಧಾನ: Net Banking, Credit Card, Debit Card, UPI ಅಥವಾ Google Pay ಮೂಲಕ ಮಾತ್ರ. DD / Postal Order / Money Order ಮೂಲಕ ಅವಕಾಶ ಇಲ್ಲ.
ಮುಖ್ಯ ಅಂಶಗಳು:
- ಶುಲ್ಕ ಪಾವತಿ ಪ್ರಾರಂಭ: 01.06.2026
- ಶುಲ್ಕ ಪಾವತಿ ಕೊನೆ ದಿನ: 30.06.2026 ರಾತ್ರಿ 11.59
- ಒಮ್ಮೆ ಪಾವತಿ ಮಾಡಿದ ಶುಲ್ಕ ಹಿಂದಿರುಗಿಸಲಾಗುವುದಿಲ್ಲ
- ಹಿಂದೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಿದ ಅಭ್ಯರ್ಥಿಗಳಿಗೆ ಮತ್ತೆ ಶುಲ್ಕ ಅಗತ್ಯವಿಲ್ಲ
ಆಯ್ಕೆ ವಿಧಾನದ ಪ್ರಕ್ರಿಯೆ!
ಎಲ್ಲಾ ಹುದ್ದೆಗಳಿಗೂ ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ + ಸಂದರ್ಶನ ಎರಡು ಹಂತಗಳಲ್ಲಿ ನಡೆಯುತ್ತದೆ.
ವ್ಯವಸ್ಥಾಪಕರು / ಪ್ರಥಮ ದರ್ಜೆ ಸಹಾಯಕರು ಆಯ್ಕೆ ಪ್ರಕ್ರಿಯೆ:
- Online ಅರ್ಜಿ ಪರಿಶೀಲಿಸಿ ಅರ್ಹ ಅಭ್ಯರ್ಥಿಗಳನ್ನು ಸರ್ಕಾರ ಸೂಚಿಸಿದ ಬಾಹ್ಯ ಮೂಲ ಸಂಸ್ಥೆ ಮೂಲಕ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ
- ಲಿಖಿತ ಪರೀಕ್ಷೆಯಲ್ಲಿ ಶೇಕಡ 85% ಕ್ಕಿಂತ ಹೆಚ್ಚು ಅಂಕ ಗಳಿಸಿದವರ ಶ್ರೇಣಿ ಪಟ್ಟಿ ತಯಾರಿಸಿ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ
- ಸಂದರ್ಶನ: 15 ಅಂಕ
- ಲಿಖಿತ + ಸಂದರ್ಶನ ಒಟ್ಟು ಅಂಕದ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿ ತಯಾರಾಗುತ್ತದೆ
ದ್ವಿತೀಯ ದರ್ಜೆ ಸಹಾಯಕರು ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ + ಸಂದರ್ಶನ
- 85% ಅಂಕ ಮಿತಿ ಮೇಲಿನ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ
- ಸಂದರ್ಶನ: 15 ಅಂಕ
ವಾಹನ ಚಾಲಕ ಮತ್ತು ಕಿರಿಯ ಸೇವಕ ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ + ಸಂದರ್ಶನ
- ಶೇಕಡ 85% ಕ್ಕಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ (15 ಅಂಕ)
- ಅಂತಿಮ ಆಯ್ಕೆ ಮೆರಿಟ್ ಪಟ್ಟಿ ಆಧಾರದ ಮೇಲೆ
ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ
ವ್ಯವಸ್ಥಾಪಕರು / ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಲಿಖಿತ ಪರೀಕ್ಷೆ:
ಒಟ್ಟು *200 ಅಂಕ, ಅವಧಿ *2 ಗಂಟೆ. ಪ್ರಶ್ನೆ ಪತ್ರಿಕೆ ಕನ್ನಡ ಮತ್ತು ಸಾಮಾನ್ಯ ಇಂಗ್ಲೀಷ್ ಭಾಷೆಯಲ್ಲಿ ಇರುತ್ತದೆ.
| ವಿಷಯ | ಅಂಕ |
|---|---|
| ಕನ್ನಡ ಭಾಷೆ | 50 |
| ಸಾಮಾನ್ಯ ಇಂಗ್ಲೀಷ್ ಭಾಷೆ | 25 |
| ಸಾಮಾನ್ಯ ಜ್ಞಾನ | 25 |
| ಸಹಕಾರ ವಿಷಯ | 50 |
| ಭಾರತದ ಸಂವಿಧಾನ | 25 |
| ಬ್ಯಾಂಕಿಂಗ್, ಸಾಮಾಜಿಕ ಚಟುವಟಿಕೆ ಮತ್ತು ವಸ್ತು ನಿಷ್ಠ ವಿಷಯ | 25 |
| ಒಟ್ಟು | 200 |
ವಾಹನ ಚಾಲಕ ಮತ್ತು ಕಿರಿಯ ಸೇವಕ ಲಿಖಿತ ಪರೀಕ್ಷೆ:
ಒಟ್ಟು 100 ಅಂಕ, ಅವಧಿ 1 ಗಂಟೆ.
| ವಿಷಯ | ಅಂಕ |
|---|---|
| ಕನ್ನಡ ಭಾಷೆ | 50 |
| ಸಾಮಾನ್ಯ ಜ್ಞಾನ | 50 |
| ಒಟ್ಟು | 100 |
ಎಲ್ಲಾ ಪ್ರಶ್ನೆ ಪತ್ರಿಕೆಗಳು ವಸ್ತು ನಿಷ್ಠ ಮಾದರಿ (MCQ) ಯಲ್ಲಿ ಇರುತ್ತವೆ ಮತ್ತು ಪ್ರತಿ ಪ್ರಶ್ನೆಗೆ 1 ಅಂಕ ಇರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ (Step by Step)
ಎಲ್ಲಾ ಅಭ್ಯರ್ಥಿಗಳು Online ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅಂಚೆ ಅಥವಾ ನೇರ ಅರ್ಜಿ ಸ್ವೀಕರಿಸಲಾಗುವುದಿಲ್ಲ.
ಹಂತ 1: ಬ್ಯಾಂಕ್ನ ಅಧಿಕೃತ ವೆಬ್ಸೈಟ್ https://www.bellarydcc.bank.in ತೆರೆಯಿರಿ https://manageexam.com/BDCCB/
ಹಂತ 2: ‘BDCC RECRUITMENT 2026’ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆ ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಓದಿ
ಹಂತ 3: SSLC ಅಂಕ ಪಟ್ಟಿಯಲ್ಲಿರುವ ಹೆಸರು, ಜನ್ಮ ದಿನಾಂಕ, ವಿಕಲ ಚೇತನ ವಿವರ ಮತ್ತು ವಿಧವೆ ಸ್ಥಿತಿಗೆ ಸಂಬಂಧಿಸಿದ ಮೀಸಲಾತಿ ಆಯ್ಕೆ ಮಾಡಿ, Mobile Number ಮತ್ತು Email ನೀಡಿ OTP ಪಡೆದು Register ಮಾಡಿಕೊಳ್ಳಿ
ಹಂತ 4: ನೋಂದಣಿ ಸಂಖ್ಯೆ ಹುಟ್ಟಿದ ದಿನಾಂಕ ನಮೂದಿಸಿ Login ಮಾಡಿ ಎಲ್ಲಾ ವಿವರ ಭರ್ತಿ ಮಾಡಿ
ಹಂತ 5: ಇತ್ತೀಚಿನ ಭಾವಚಿತ್ರ ಮತ್ತು ಸಹಿ ಅಪ್ಲೋಡ್ ಮಾಡಿ (ಖಾಲಿ ಬಿಳಿ ಕಾಗದದ ಮೇಲೆ ಇರಿಸಿ, ಕಪ್ಪು ಪೆನ್ ನಲ್ಲಿ ಸಹಿ ಮಾಡಿ ಸ್ಕ್ಯಾನ್ ಮಾಡಿ Upload ಮಾಡಬೇಕು)
ಹಂತ 6: SSLC ಅಂಕ ಪಟ್ಟಿ, ಮೀಸಲಾತಿ ಮತ್ತು ವಯೋಮಿತಿ ಸಡಿಲಿಕೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕರಣದೊಂದಿಗೆ ಅಪ್ಲೋಡ್ ಮಾಡಿ
ಹಂತ 7: Preview ನಲ್ಲಿ ಎಲ್ಲಾ ವಿವರ ಸರಿ ಇದೆ ಎಂದು ದೃಢಪಡಿಸಿಕೊಂಡ ನಂತರ ಸಂಬಂಧಿಸಿದ ಎಲ್ಲಾ ಚೆಕ್ ಬಾಕ್ಸ್ ಒತ್ತಿ Submit ಮಾಡಿ
ಹಂತ 8: ಅರ್ಜಿ Submit ಮಾಡಿದ ನಂತರ ಅರ್ಜಿ ಶುಲ್ಕ ಮತ್ತು Gateway ಶುಲ್ಕವನ್ನು Payment Gateway ಮೂಲಕ ಪಾವತಿಸಿ
ಹಂತ 9: ಅರ್ಜಿಯ ಪ್ರತಿ Download ಮಾಡಿ ಇಟ್ಟುಕೊಳ್ಳಿ
ಗಮನಿಸಿ: ಒಮ್ಮೆ Submit ಮಾಡಿದ ನಂತರ ಯಾವುದೇ ಮಾಹಿತಿ ಬದಲಾಯಿಸಲು ಅವಕಾಶ ಇಲ್ಲ. ಅಪೂರ್ಣ, ಫೋಟೋ ಮತ್ತು ಸಹಿ ಇಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಮುಂಚಿನ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ
ದಿನಾಂಕ 06.04.2026 ರ ನೇಮಕಾತಿ ಪ್ರಕಟಣೆ (ಸಂ: 12:2026-27) ಅಡಿಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಿದ ಅಭ್ಯರ್ಥಿಗಳಿಗೆ:
- ಪ್ರಸ್ತುತ ಪ್ರಕಟಣೆ ಅಡಿಯಲ್ಲಿ ಅಲ್ಲಿ ಸಲ್ಲಿಸಿದ ಅದೇ ನೋಂದಣಿ ಸಂಖ್ಯೆ ಬಳಸಿ ಮರು ಅರ್ಜಿ (Re-submit) ಸಲ್ಲಿಸಬೇಕು
- ಹಿಂದೆ ಶುಲ್ಕ ಪಾವತಿ ಮಾಡಿದ್ದರಿಂದ ಈ ಬಾರಿ ಮತ್ತೆ ಶುಲ್ಕ ಪಾವತಿ ಮಾಡಬೇಕಿಲ್ಲ
- ಅರ್ಜಿಯಲ್ಲಿ ಹಿಂದೆ ಶುಲ್ಕ ಪಾವತಿ ಮಾಡಿ ಸಲ್ಲಿಸಿದ ಅರ್ಜಿ ನೋಂದಣೆ ಸಂಖ್ಯೆ ವಿವರವನ್ನು ಸ್ಪಷ್ಟವಾಗಿ ನಮೂದಿಸಿ
- ಮರು ಅರ್ಜಿ ಸಲ್ಲಿಸಿದ ನಂತರ ಮತ್ತೊಮ್ಮೆ ತಿದ್ದಪಡಿ ಮಾಡಲು ಅವಕಾಶ ಇಲ್ಲ
ಅಗತ್ಯ ದಾಖಲೆಗಳು (Documents Required)
ಅರ್ಜಿ ಮತ್ತು ಸಂದರ್ಶನ ಸಮಯದಲ್ಲಿ ಈ ದಾಖಲೆಗಳು ಅಗತ್ಯ:
ಸಾಮಾನ್ಯ ದಾಖಲೆಗಳು:
- SSLC ಅಂಕ ಪಟ್ಟಿ ಮತ್ತು ಜನ್ಮ ದಿನಾಂಕ ಪ್ರಮಾಣ ಪತ್ರ
- ಪದವಿ / PUC ಎಲ್ಲಾ ವರ್ಷ ಮತ್ತು ಸೆಮಿಸ್ಟರ್ ಅಂಕ ಪಟ್ಟಿ
- ಪಾಸ್ಪೋರ್ಟ್ ಅಳತೆ ಭಾವಚಿತ್ರ (ಇತ್ತೀಚಿನದು)
- ಸಹಿ
ಮೀಸಲಾತಿ / ವಿಶೇಷ ದಾಖಲೆಗಳು:
- SC/ST/OBC ಜಾತಿ ಪ್ರಮಾಣ ಪತ್ರ (ತಹಶೀಲ್ದಾರ್ ಸ್ತರ ಅಥವಾ ಮೇಲ್ಪಟ್ಟ ಅಧಿಕಾರಿಯಿಂದ)
- ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ ಪ್ರಮಾಣ ಪತ್ರ (ನಮೂನೆ-ಎ, ಸಕ್ಷಮ ಪ್ರಾಧಿಕಾರದ ಉಪ ವಿಭಾಗ ಸಹಾಯಕ ಆಯುಕ್ತರಿಂದ)
- ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ (ನಮೂನೆ-1 ಮತ್ತು ನಮೂನೆ-2)
- ಮಾಜಿ ಸೈನಿಕ ಡಿಸ್ಚಾರ್ಜ್ ಪ್ರಮಾಣ ಪತ್ರ ಮತ್ತು ಪಿಂಚಣಿ / ಗ್ರಾಚ್ಯುಟಿ ಪ್ರಮಾಣ ಪತ್ರ
- ವಿಕಲ ಚೇತನ ಪ್ರಮಾಣ ಪತ್ರ (ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿ)
- ವಿಧವೆ ಪ್ರಮಾಣ ಪತ್ರ (ತಹಶೀಲ್ದಾರ್ರಿಂದ)
- ಡ್ರೈವಿಂಗ್ ಲೈಸೆನ್ಸ್ (ವಾಹನ ಚಾಲಕ ಅಭ್ಯರ್ಥಿಗಳಿಗೆ)
- ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ NOC (No Objection Certificate)
ಮುಖ್ಯ ಸೂಚನೆಗಳು
- Online ಅರ್ಜಿ ಮಾತ್ರ: ಯಾವುದೇ ಸಂದರ್ಭದಲ್ಲಿ ನೇರ ಅಥವಾ ಅಂಚೆ ಅರ್ಜಿ ಸ್ವೀಕರಿಸಲಾಗುವುದಿಲ್ಲ
- ತಪ್ಪು ಮಾಹಿತಿ ನೀಡಿದ್ದಲ್ಲಿ: ಅಂಥ ಅರ್ಜಿ ಯಾವ ಹಂತದಲ್ಲಿ ಆದರೂ ತಿರಸ್ಕರಿಸಲಾಗುತ್ತದೆ ಮತ್ತು ಕ್ರಿಮಿನಲ್ ಕ್ರಮ ಜರುಗಿಸಲಾಗುತ್ತದೆ
- ಪ್ರವೇಶ ಪತ್ರ: ಲಿಖಿತ ಪರೀಕ್ಷೆಗೆ ಪ್ರತ್ಯೇಕ ಪ್ರವೇಶ ಪತ್ರ ಕಳಿಸಲಾಗುವುದಿಲ್ಲ. ಬ್ಯಾಂಕ್ ವೆಬ್ಸೈಟ್ ಮೂಲಕ Download ಮಾಡಿಕೊಳ್ಳಬೇಕು
- ಮೂಲ ದಾಖಲೆ: ಸಂದರ್ಶನ ಸಮಯದಲ್ಲಿ Uploaded ಮಾಡಿದ ಎಲ್ಲಾ ದಾಖಲೆಗಳ ಮೂಲ ಪ್ರತಿ ತಪ್ಪದೆ ತರಬೇಕು
- ಆಯ್ಕೆ ಮಾಡಿದ ಅಭ್ಯರ್ಥಿ 2 ವರ್ಷ ಪರೀಕ್ಷಾರ್ಥ ಸೇವೆ ಸಲ್ಲಿಸಬೇಕಾಗುತ್ತದೆ
- ಈ ನೇಮಕಾತಿ ಅವಧಿಯಲ್ಲಿ ಕರ್ನಾಟಕ ಸರ್ಕಾರ / ನ್ಯಾಯಾಲಯದ ಆದೇಶಗಳಿಗೆ ಒಳಪಟ್ಟಿರುತ್ತದೆ
ಮುಖ್ಯ ದಿನಾಂಕಗಳ ಸಾರಾಂಶ
| ಚಟುವಟಿಕೆ | ದಿನಾಂಕ |
|---|---|
| ಅರ್ಜಿ ಪ್ರಾರಂಭ | 01.06.2026 |
| ಅರ್ಜಿ ಕೊನೆ ದಿನ | 30.06.2026 |
| ಶುಲ್ಕ ಪಾವತಿ ಕೊನೆ ದಿನ | 30.06.2026 ರಾತ್ರಿ 11.59 |
| ವಯೋಮಿತಿ ಲೆಕ್ಕಾಚಾರದ ದಿನಾಂಕ | 30.06.2026 |
ಸಂಪರ್ಕ ಮಾಹಿತಿ
ಅರ್ಜಿ ಸಲ್ಲಿಸುವಾಗ ಯಾವುದಾದರೂ ತಾಂತ್ರಿಕ ಸಮಸ್ಯೆ ಅಥವಾ ಸಂಶಯ ಎದುರಾದರೆ ಕೆಲಸದ ದಿನಗಳಂದು ಬೆಳಿಗ್ಗೆ 10.30 ರಿಂದ ಸಂಜೆ 5.00 ಗಂಟೆ ಒಳಗೆ ಸಂಪರ್ಕಿಸಬಹುದು:
- ವೆಬ್ಸೈಟ್: www.bellarydcc.bank.in
- ಇ-ಮೇಲ್ (CEO): ceo@bellarydcc.bank.in
- Help Line 1: 98804 21742
- Help Line 2 (Email): helpdesk.bdccb@gmail.com
- ಬ್ಯಾಂಕ್ ದೂರವಾಣಿ: 91872 35482
- ವಿಳಾಸ: ಪಿ.ಬಿ. ನಂ.17, ಹೊಸಪೇಟೆ – 583201
ಸಂಪಾದಕರ ಮಾತು
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲಿ ಸರ್ಕಾರಿ ಸೌಲಭ್ಯ ಸಹಿತ ಉದ್ಯೋಗ ಪಡೆಯಲು ಇದೊಂದು ಉತ್ತಮ ಅವಕಾಶ. SSLC ಉತ್ತೀರ್ಣರಿಂದ ಹಿಡಿದು ಪದವಿ ಪಡೆದ ಅಭ್ಯರ್ಥಿಗಳವರೆಗೆ ಎಲ್ಲರಿಗೂ ಇಲ್ಲಿ ಅವಕಾಶ ಇದೆ. ಅರ್ಜಿ ಸಲ್ಲಿಸಲು ಕೊನೆ ದಿನ 30 ಜೂನ್ 2026. ತಡ ಮಾಡದೆ ಇಂದೇ www.bellarydcc.bank.in ಭೇಟಿ ಮಾಡಿ ಅರ್ಜಿ ಸಲ್ಲಿಸಿ. https://manageexam.com/BDCCB/
ಸ್ನೇಹಿತರೊಡನೆ ಈ ಮಾಹಿತಿ ಶೇರ್ ಮಾಡಿ. ಇಂತಹ ಉದ್ಯೋಗ ಮಾಹಿತಿಗಾಗಿ ನಮ್ಮ ಬ್ಲಾಗ್ ಫಾಲೋ ಮಾಡಿ.Privacy Policy
Rohini.B is a professional content strategist and the founder of gpaskannada.in. Since 2021, he has been dedicated to bridging the information gap for the citizens of Karnataka by simplifying complex government notifications, job alerts, and welfare schemes into clear, actionable guides. His mission is to empower residents with accurate, timely, and easy-to-understand information that helps them secure opportunities and government benefits with confidence.