Telegram Join My Telegram WhatsApp Join My WhatsApp
LOADING... ➤
GPAS Kannada
By GPAS Kannada Team Updated: May 16, 2026

ರಾಯಚೂರು ಜಿಲ್ಲಾ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕ ನೇಮಕಾತಿ 2026 – 13 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ | ಸಂಪೂರ್ಣ ಮಾಹಿತಿಗಾಗಿ ಓದಿ.

ರಾಯಚೂರು ಜಿಲ್ಲಾ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕ ನೇಮಕಾತಿ 2026 – 13 ಹುದ್ದೆಗಳಿಗೆ ಅರ್ಜಿ ಆರಂಭ. ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಕೊನೆಯ ದಿನಾಂಕ ಮತ್ತು ಆನ್‌ಲೈನ್ ಅರ್ಜಿ ವಿಧಾನ ತಿಳಿಯಿರಿ. ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ.

ರಾಯಚೂರು ಜಿಲ್ಲೆಯ ಸ್ಥಳೀಯ ಯುವ ಉದ್ಯೋಗಾಕಾಂಕ್ಷಿಗಳಿಗೆ ಒಂದು ಮಹತ್ವದ ಅವಕಾಶ ಬಂದಿದೆ. ರಾಯಚೂರು ಜಿಲ್ಲಾ ಪಂಚಾಯತ್ ಗ್ರಾಮ ಪಂಚಾಯತಿಗಳಲ್ಲಿ “ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕ” ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 13 ಹುದ್ದೆಗಳು ಲಭ್ಯವಿದ್ದು, ಅರ್ಜಿ ಸಲ್ಲಿಸಲು 10 ಜೂನ್ 2026 ಕೊನೆಯ ದಿನಾಂಕವಾಗಿದೆ.

ಈ ನೇಮಕಾತಿ ಹೊರಗಿನ ಜಿಲ್ಲೆ ಅಥವಾ ತಾಲ್ಲೂಕಿನ ಅಭ್ಯರ್ಥಿಗಳಿಗಲ್ಲ – ಸ್ಥಳೀಯ ಗ್ರಾಮ ಪಂಚಾಯತ್ ನಿವಾಸಿಗಳಿಗೆ ಮಾತ್ರ ಮೊದಲ ಆದ್ಯತೆ ಇರುವುದರಿಂದ, ಈ ಪ್ರದೇಶದ ಅಭ್ಯರ್ಥಿಗಳಿಗೆ ಇದು ನೇರ ಮತ್ತು ಅತ್ಯಂತ ಅನುಕೂಲಕರವಾದ ಅವಕಾಶ.

ಅರ್ಜಿ ಸಲ್ಲಿಸುವ ಮೊದಲು ಈ ಲೇಖನದಲ್ಲಿ ನೀಡಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳಿ.3

ನೇಮಕಾತಿ ಒಂದು ನೋಟದಲ್ಲಿ

ವಿವರ ಮಾಹಿತಿ
ಸಂಸ್ಥೆರಾಯಚೂರು ಜಿಲ್ಲಾ ಪಂಚಾಯತ್
ಹುದ್ದೆಗ್ರಂಥಾಲಯ ಮೇಲ್ವಿಚಾರಕ
ಒಟ್ಟು ಹುದ್ದೆಗಳು13
ಅರ್ಜಿ ಆರಂಭ 27.05.2026
ಕೊನೆಯ ದಿನಾಂಕ10.06.2026
ಅರ್ಜಿ ವಿಧಾನ ಆನ್‌ಲೈನ್ ಮಾತ್ರ

ಅಧಿಕೃತ ವೆಬ್‌ಸೈಟ್
zpraichur.karnataka.gov.in

1.ಸ್ಥಳೀಯರಿಗೆ ಮಾತ್ರ ಅವಕಾಶ – ಇದು ಈ ನೇಮಕಾತಿಯ ಮುಖ್ಯ ವಿಶೇಷ

ಈ ನೇಮಕಾತಿಯ ಅತ್ಯಂತ ಗಮನ ಸೆಳೆಯುವ ಅಂಶ ಎಂದರೆ ಸ್ಥಳೀಯ ನಿವಾಸ ಷರತ್ತು.

ಅಧಿಸೂಚನೆಯಲ್ಲಿ ಹೆಸರಿಸಲಾದ ನಿರ್ದಿಷ್ಟ ಗ್ರಾಮ ಪಂಚಾಯತಿಗಳಾದ ಅಲಬನೂರು, ಗಾಂಧಿನಗರ, ಕಲ್ಲೂರು, ಭೋಗಾವತಿ ಸೇರಿದಂತೆ ಇತರ ಗ್ರಾಮ ಪಂಚಾಯತಿಗಳಲ್ಲಿ ವಾಸಿಸುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಅಂದರೆ ಅರ್ಹ ಸ್ಥಳೀಯ ಅಭ್ಯರ್ಥಿಗಳಿದ್ದರೆ ಹೊರಗಿನ ಜಿಲ್ಲೆ/ತಾಲ್ಲೂಕಿನ ಅಭ್ಯರ್ಥಿಗಳಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಮಹತ್ವದ ಅಂಶ: ಸ್ಥಳೀಯ ನಿವಾಸ ದೃಢೀಕರಿಸಲು ಹಶೀಲ್ದಾರರಿಂದ ಪಡೆದ ನಿವಾಸ ಪ್ರಮಾಣ ಪತ್ರ (Residence Certificate) ಕಡ್ಡಾಯ. ಇದನ್ನು ತರಿಸಲು ಕೆಲವು ದಿನಗಳ ಸಮಯ ತಗಲಬಹುದು. ಆದ್ದರಿಂದ ಇಂದೇ ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಪಡೆಯಲು ಪ್ರಾರಂಭಿಸಿ.

2.ವಿದ್ಯಾರ್ಹತೆ – ಕೇವಲ PUC ಪಾಸ್ ಸಾಲದು

    ಅಭ್ಯರ್ಥಿಗಳು ಈ ಕೆಳಗಿನ ಮೂರೂ ಅರ್ಹತೆಗಳನ್ನು ಹೊಂದಿರಬೇಕು:

    ಅ) ದ್ವಿತೀಯ ಪಿಯುಸಿ ಉತ್ತೀರ್ಣ
    ಮಾನ್ಯತೆ ಪಡೆದ ಯಾವುದೇ ಬೋರ್ಡ್‌ನಿಂದ 2ನೇ ಪಿಯುಸಿ ಪರೀಕ್ಷೆ ಪಾಸ್ ಆಗಿರಬೇಕು. ಗಮನಿಸಿ – ಡಿಗ್ರಿ ಅಥವಾ ಸ್ನಾತಕೋತ್ತರ ಪದವಿ ಇದ್ದರೂ ಸಹ, ಆಯ್ಕೆ ಪ್ರಕ್ರಿಯೆಯಲ್ಲಿ ಕೇವಲ ಪಿಯುಸಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

    ಬ) ಲೈಬ್ರರಿ ಸೈನ್ಸ್ ಸರ್ಟಿಫಿಕೇಟ್ ಕೋರ್ಸ್
    ಲೈಬ್ರರಿ ಸೈನ್ಸ್‌ನಲ್ಲಿ ಅಧಿಕೃತ ಸರ್ಟಿಫಿಕೇಷನ್ ಕೋರ್ಸ್ ಮಾಡಿರಬೇಕು. ಇದು ಗ್ರಂಥಾಲಯ ನಿರ್ವಹಣೆಯ ಮೂಲ ಜ್ಞಾನವನ್ನು ಖಚಿತಪಡಿಸುತ್ತದೆ.

    See also  ಕರ್ನಾಟಕ ಕೃಷಿ ಇಲಾಖೆ ನೇಮಕಾತಿ 2026 – 670+ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು | ಸಂಪೂರ್ಣ ವಿವರ,ಮಾಹಿತಿ

    ಕ) ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ
    ಕನಿಷ್ಠ 3 ತಿಂಗಳ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿದ ಪ್ರಮಾಣ ಪತ್ರ ಇರಬೇಕು. ಗ್ರಂಥಾಲಯಗಳನ್ನು ಡಿಜಿಟಲ್ ಮಾಹಿತಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಅರ್ಹತೆ ಕಡ್ಡಾಯಗೊಳಿಸಲಾಗಿದೆ.

    ಗಮನಿಸಬೇಕಾದ ಎಚ್ಚರಿಕೆಗಳು:

    • Result Awaited ಅಭ್ಯರ್ಥಿಗಳು ಅರ್ಹರಲ್ಲ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಾದ 10.06.2026 ರೊಳಗೆ ನಿಮ್ಮ ಫಲಿತಾಂಶ ಪ್ರಕಟವಾಗಿರಬೇಕು.
    • Degree/PG ಹೊಂದಿದ್ದರೂ ಮೆರಿಟ್ ಲಿಸ್ಟ್ ತಯಾರಿಸಲು ಬಳಸುವುದು ಪಿಯುಸಿ ಅಂಕಗಳನ್ನು ಮಾತ್ರ ಎಂಬುದು ನೆನಪಿರಲಿ. ಹೆಚ್ಚಿನ ಡಿಗ್ರಿ ಇದ್ದರೂ ಕಡಿಮೆ ಪಿಯುಸಿ ಅಂಕ ಇದ್ದರೆ ಹಿಂದೆ ಬೀಳುವ ಸಾಧ್ಯತೆ ಇದೆ
    1. ಹುದ್ದೆಗಳ ವರ್ಗೀಕರಣ ಮತ್ತು ಮೀಸಲಾತಿ

    ಒಟ್ಟು 13 ಹುದ್ದೆಗಳನ್ನು ರೋಸ್ಟರ್ ಬಿಂದುಗಳ ಆಧಾರದ ಮೇಲೆ ಈ ರೀತಿ ವಿಂಗಡಿಸಲಾಗಿದೆ:

    ವರ್ಗ ಹುದ್ದೆಗಳ ಸಂಖ್ಯೆ
    ಸಾಮಾನ್ಯ ವರ್ಗ (GM)06
    ಪರಿಶಿಷ್ಟ ಜಾತಿ (SC)03
    ಪ್ರವರ್ಗ-2ಎ (2A)02
    ಪ್ರವರ್ಗ-101
    ಪ್ರವರ್ಗ-2ಬಿ (2B)01
    ಒಟ್ಟು 13

    ಅಭ್ಯರ್ಥಿಗಳು ತಮ್ಮ ವರ್ಗ/ಜಾತಿ ಪ್ರಮಾಣ ಪತ್ರ ಸರಿಯಾಗಿ ಇದೆಯೇ ಎಂದು ಮೊದಲು ಪರಿಶೀಲಿಸಿ, ನಂತರ ಅರ್ಜಿ ಸಲ್ಲಿಸಿ.

    1. ವಯೋಮಿತಿ – ಯಾರಿಗೆ ಎಷ್ಟು ವರ್ಷ?

    ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ ಈ ರೀತಿ ಇರುತ್ತದೆ:

    ವರ್ಗಗರಿಷ್ಠ ವಯೋಮಿತಿ
    ಸಾಮಾನ್ಯ ವರ್ಗ40 ವರ್ಷ
    ಹಿಂದುಳಿದ ವರ್ಗಗಳು43 ವರ್ಷ
    SC / ST / ಪ್ರವರ್ಗ-145 ವರ್ಷ
    ವಿಧವೆಯರು ಮತ್ತು ವಿಶೇಷ ಚೇತನರುಮೇಲ್ಕಂಡ ಮಿತಿಗೆ ಹೆಚ್ಚುವರಿ 10 ವರ್ಷ

    ವಿಧವೆಯರಿಗೆ ಮತ್ತು ವಿಶೇಷ ಚೇತನ (PH) ಅಭ್ಯರ್ಥಿಗಳಿಗೆ ನೀಡಲಾಗಿರುವ 10 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆ ಸಮಾಜದ ಹಿಂದಿದ್ದ ವರ್ಗಕ್ಕೆ ಒಂದು ದೊಡ್ಡ ಅನುಕೂಲ.

    1. ಇದು ಸರ್ಕಾರಿ ಕೆಲಸವಲ್ಲ – ಅರ್ಜಿ ಸಲ್ಲಿಸುವ ಮೊದಲು ಇದನ್ನು ಓದಿ

    ಅನೇಕ ಅಭ್ಯರ್ಥಿಗಳು ಇದನ್ನು ಸರ್ಕಾರಿ ಉದ್ಯೋಗ ಎಂದು ತಿಳಿದು ಅರ್ಜಿ ಸಲ್ಲಿಸಬಹುದು. ಆದರೆ ಅಧಿಸೂಚನೆಯ 21ನೇ ಅಂಶ ಸ್ಪಷ್ಟವಾಗಿ ಹೇಳುತ್ತದೆ:

    ಸಂಭಾವನೆ: ನಿಯಮಿತ ಸರ್ಕಾರಿ ವೇತನದ ಬದಲು ಸರ್ಕಾರ ನಿಗದಿಪಡಿಸಿದ “ಗೌರವ ಸಂಭಾವನೆ” (Honorarium) ನೀಡಲಾಗುತ್ತದೆ.

    ಈ ಹುದ್ದೆಗಳಿಗೆ ನೇಮಕಗೊಂಡವರು ಗ್ರಾಮ ಪಂಚಾಯತ್ ನೌಕರರಾಗಿರುತ್ತಾರೆ, ರಾಜ್ಯ ಸರ್ಕಾರಿ ನೌಕರರಲ್ಲ.

    ಸೇವಾ ನಿಯಮಗಳು: “ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಂಥಾಲಯ ಮೇಲ್ವಿಚಾರಕರ ಸೇವಾ) ನಿಯಮಗಳು, 2022” ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕು.

    See also  KMF GUMUL ನೇಮಕಾತಿ 2026 – 55 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ | ಸಂಪೂರ್ಣ ವಿವರ

    ಇದು ನಿಮ್ಮ ನಿರ್ಧಾರದ ಮೇಲೆ ಪ್ರಭಾವ ಬೀರಬಹುದಾದ ಮಾಹಿತಿ. ಅರ್ಜಿ ಸಲ್ಲಿಸುವ ಮೊದಲು ಇದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಿ.

    06.ಅರ್ಜಿ ಶುಲ್ಕ – ವರ್ಗವಾರು ವಿವರ

    ವರ್ಗಅರ್ಜಿ ಶುಲ್ಕ
    ಸಾಮಾನ್ಯ ವರ್ಗ (GM)₹500
    OBC (ಹಿಂದುಳಿದ ವರ್ಗ)₹300
    SC / ST / ಪ್ರವರ್ಗ-1₹200
    ವಿಶೇಷ ಚೇತನ (PH)₹100

    ಶುಲ್ಕ ಪಾವತಿ ವಿಧಾನ: ಶುಲ್ಕವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ನೇರ ಜಮಾ ಮಾಡಿ, ಚಲನ್ ಪ್ರತಿಯನ್ನು ಅರ್ಜಿಯೊಂದಿಗೆ upload ಮಾಡಬೇಕು.

    • ಖಾತೆ ಹೆಸರು: ZP GENERAL ACCOUNTS
    • ಬ್ಯಾಂಕ್: State Bank of India, ಲಿಂಗಸೂಗೂರು ರಸ್ತೆ, ರಾಯಚೂರು
    • ಖಾತೆ ಸಂಖ್ಯೆ: 52075526994
    • IFSC ಕೋಡ್: SBIN0020203

    ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ತಿರಸ್ಕರಿಸಲಾಗುತ್ತದೆ.

    7. ಅರ್ಜಿ ಸಲ್ಲಿಸುವ ಹಂತಗಳು

    1. ಅಧಿಕೃತ ವೆಬ್‌ಸೈಟ್ zpraichur.karnataka.gov.in ಗೆ ಭೇಟಿ ನೀಡಿ
    2. ನೇಮಕಾತಿ ವಿಭಾಗ (Recruitment Section) ತೆರೆಯಿರಿ
    3. ಗ್ರಂಥಾಲಯ ಮೇಲ್ವಿಚಾರಕ ಹುದ್ದೆ ಅಧಿಸೂಚನೆ ಆಯ್ಕೆ ಮಾಡಿ
    4. ಆನ್‌ಲೈನ್ ಅರ್ಜಿ ಫಾರ್ಮ್ ತುಂಬಿ
    5. ಬ್ಯಾಂಕ್‌ನಲ್ಲಿ ಶುಲ್ಕ ಪಾವತಿ ಮಾಡಿ ಚಲನ್ ಉಳಿಸಿಕೊಳ್ಳಿ
    6. ಚಲನ್ ಮತ್ತು ಅಗತ್ಯ ದಾಖಲೆಗಳನ್ನು upload ಮಾಡಿ
    7. ಅರ್ಜಿ submit ಮಾಡಿ, confirmation ಪ್ರಿಂಟ್ ತೆಗೆದಿಡಿ

    8. ಸಿದ್ಧಪಡಿಸಬೇಕಾದ ದಾಖಲೆಗಳ ಪಟ್ಟಿ

    ಅರ್ಜಿ ಸಲ್ಲಿಸುವ ಮೊದಲು ಈ ಎಲ್ಲ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

    • ದ್ವಿತೀಯ ಪಿಯುಸಿ ಅಂಕಪಟ್ಟಿ ಮತ್ತು ಸರ್ಟಿಫಿಕೇಟ್
    • ಲೈಬ್ರರಿ ಸೈನ್ಸ್ ಸರ್ಟಿಫಿಕೇಟ್ ಕೋರ್ಸ್ ಪ್ರಮಾಣ ಪತ್ರ
    • ಕಂಪ್ಯೂಟರ್ ಕೋರ್ಸ್ (ಕನಿಷ್ಠ 3 ತಿಂಗಳು) ಪ್ರಮಾಣ ಪತ್ರ
    • ತಹಶೀಲ್ದಾರರ ನಿವಾಸ ಪ್ರಮಾಣ ಪತ್ರ (Residence Certificate)
    • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
    • ಜನ್ಮ ದಿನಾಂಕ ದಾಖಲೆ (SSLC ಮಾರ್ಕ್ಸ್ ಕಾರ್ಡ್)
    • ಪಾಸ್‌ಪೋರ್ಟ್ ಅಳತೆಯ ಫೋಟೋ
    • ಬ್ಯಾಂಕ್ ಶುಲ್ಕ ಪಾವತಿ ಚಲನ್

    9. ಪ್ರಮುಖ ದಿನಾಂಕಗಳು – ತಪ್ಪಿಸಿಕೊಳ್ಳಬೇಡಿ

    ಘಟನೆದಿನಾಂಕ
    ಅರ್ಜಿ ಆರಂಭ27 ಮೇ 2026
    ಅರ್ಜಿ ಕೊನೆಯ ದಿನ10 ಜೂನ್ 2026

    ಅರ್ಜಿ ಸಲ್ಲಿಸಲು ಕೇವಲ ಕೆಲವೇ ದಿನಗಳು ಉಳಿದಿವೆ. ದಾಖಲೆ ಸಿದ್ಧಪಡಿಸಲು ಮತ್ತು ಅರ್ಜಿ ತುಂಬಲು ಸಮಯ ಬೇಕಾಗುತ್ತದೆ. ಕೊನೆಯ ದಿನದ ಗಡಿಬಿಡಿ ತಪ್ಪಿಸಿ.

    10. ಸಂಪರ್ಕ ಮತ್ತು ಹೆಚ್ಚಿನ ಮಾಹಿತಿ

    ಅಧಿಸೂಚನೆ ಬಗ್ಗೆ ಯಾವುದೇ ಸ್ಪಷ್ಟೀಕರಣ ಬೇಕಾದರೆ ಜಿಲ್ಲಾ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಿ:

    ಸಂಪಾದಕರ ಮಾತು

    ರಾಯಚೂರು ಜಿಲ್ಲೆಯ ಸ್ಥಳೀಯ ಯುವಜನರಿಗೆ ಇದೊಂದು ನೇರ ಅವಕಾಶ. ಮೆರಿಟ್ ಆಧಾರಿತ ಪಾರದರ್ಶಕ ಆಯ್ಕೆ ನಡೆಯುತ್ತದೆ. ಆದರೆ ಅರ್ಜಿ ಸಲ್ಲಿಸುವ ಮೊದಲು ಈ ಎರಡು ಅಂಶಗಳನ್ನು ನೆನಪಿಡಿ:

    1. ಇದು ಗ್ರಾಮ ಪಂಚಾಯತ್ ಹುದ್ದೆ – ರಾಜ್ಯ ಸರ್ಕಾರಿ ಹುದ್ದೆಯಲ್ಲ
    2. ಮೆರಿಟ್ ಲಿಸ್ಟ್‌ಗೆ ಪಿಯುಸಿ ಅಂಕಗಳು ಮಾತ್ರ ಮುಖ್ಯ
    See also  ಬಳ್ಳಾರಿ DCC ಬ್ಯಾಂಕ್ ನೇಮಕಾತಿ 2026 – 82 ಹುದ್ದೆಗಳಿಗೆ Online ಅರ್ಜಿ ಸಲ್ಲಿಸಿ | ಕೊನೆ ದಿನಾಂಕ June 30 ಇಂದೇ ಅರ್ಜಿ ಸಲ್ಲಿಸಲು ಸಂಪೂರ್ಣ ಓದಿ!

    ಈ ಷರತ್ತುಗಳು ಅರ್ಥವಾಗಿ, ಅರ್ಹತೆ ಇದೆ ಎಂದು ಖಚಿತಗೊಂಡ ನಂತರ 10 ಜೂನ್ 2026 ರ ಮೊದಲು ಆನ್‌ಲೈನ್ ಅರ್ಜಿ ಸಲ್ಲಿಸಿ.