Telegram Join My Telegram WhatsApp Join My WhatsApp
LOADING... ➤
GPAS Kannada
By GPAS Kannada Team Updated: May 16, 2026

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ವಿಷಯ ಪರಿಣಿತರು ಮತ್ತು ಯುವ ವೃತ್ತಿಪರರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ – 2026

ಕರ್ನಾಟಕ ಸರ್ಕಾರದ ಪಂಚಾಯತ್ ರಾಜ್ ಆಯುಕ್ತಾಲಯವು ಒಂದು ಮಹತ್ವದ ಅವಕಾಶವನ್ನು ತೆರೆದಿದೆ. ಸಾಮಾಜಿಕ ಕಲಕಳಿಯುಳ್ಳ ಸ್ಥಳೀಯ ಆಡಳಿತ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. “ಸಾಮಾಜಿಕವಾಗಿ ಸ್ಪಂದಿಸುವ ಸ್ಥಳೀಯ ಆಡಳಿತ (SRLG)” ಕೋಶದಲ್ಲಿ ಒಬ್ಬರು ವಿಷಯ ಪರಿಣಿತರು ಮತ್ತು ಇಬ್ಬರು ಯುವ ವೃತ್ತಿಪರರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಸಂಭಾವನೆ ಮತ್ತು ಮುಖ್ಯ ಮಾಹಿತಿಯನ್ನು ಸಂಪೂರ್ಣವಾಗಿ ನೀಡಲಾಗಿದೆ.

SRLG ಕೋಶ ಎಂದರೇನು?

ಕರ್ನಾಟಕದಲ್ಲಿ ಗ್ರಾಮ ಪಂಚಾಯತಿಗಳು ಆರೋಗ್ಯ, ರಕ್ಷಣೆ, ಹಣತ್ಯಾಜ್ಯ ನಿರ್ವಹಣೆ, ಗ್ರಂಥಾಲಯ ಅಭಿವೃದ್ಧಿ ಮುಂತಾದ ಅನೇಕ ಕ್ಷೇತ್ರಗಳಲ್ಲಿ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ಈ ಗ್ರಾಮ ಪಂಚಾಯತಿಗಳನ್ನು ಮತ್ತಷ್ಟು ಸಾಮಾಜಿಕ ಕಲಕಳಿಯುಳ್ಳ, ಸ್ವಂದನಶೀಲ ಹಾಗೂ ಸಮರ್ಥ ಗ್ರಾಮ ಸರ್ಕಾರಗಳನ್ನಾಗಿ ರೂಪಿಸಲು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ “ಸಾಮಾಜಿಕವಾಗಿ ಸ್ಪಂದಿಸುವ ಸ್ಥಳೀಯ ಆಡಳಿತ (SRLG)” ಕೋಶವನ್ನು ಸ್ಥಾಪಿಸಲಾಗಿದೆ. ಈ ಕೋಶದ ಮೂಲಕ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಿಯೂ ತನ್ನ ಜನರ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸಲು ಸಕ್ಷಮವಾಗಲಿದೆ.

ಹುದ್ದೆಗಳ ವಿವರ

ಈ ನೇಮಕಾತಿಯಲ್ಲಿ ಒಟ್ಟು ಮೂರು ಹುದ್ದೆಗಳಿವೆ:

ಹುದ್ದೆಖಾಲಿ ಹುದ್ದೆಗಳ ಸಂಖ್ಯೆಮಾಸಿಕ ಸಂಭಾವನೆ
ವಿಷಯ ಪರಿಣಿತರು (Subject Matter Expert)01₹ 1,00,000/-
ಯುವ ವೃತ್ತಿಪರರು (Young Professional)02₹ 75,000/-

ಇವು ಗುತ್ತಿಗೆ ಆಧಾರದ ಹುದ್ದೆಗಳಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು 31.03.2027ವರೆಗೆ ನೇಮಕ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳ ಕಾರ್ಯಕ್ಷಮತೆ ಮತ್ತು ಸರ್ಕಾರದ ಅನುದಾನದ ಲಭ್ಯತೆಯ ಮೇಲೆ ಅವಧಿ ವಿಸ್ತರಿಸಲಾಗುವುದು.

ವಿಷಯ ಪರಿಣಿತರ ಅರ್ಹತೆ (Subject Matter Expert – 01 ಹುದ್ದೆ)

ವಿದ್ಯಾರ್ಹತೆ

ಸಮಾಜ ಶಾಸ್ತ್ರ, ಸಮಾಜ ಕಾರ್ಯ, ಗ್ರಾಮೀಣಾಭಿವೃದ್ಧಿ ಅಥವಾ ಸಾರ್ವಜನಿಕ ನೀತಿ ವಿಷಯದಲ್ಲಿ ಪದವಿ ಹೊಂದಿರಬೇಕು.

ಅನುಭವ

  • ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಠ 5 ರಿಂದ 8 ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಅಗತ್ಯ.
  • ಪಂಚಾಯತ್ ರಾಜ್ ಕಾರ್ಯ, ವಿಕೇಂದ್ರೀಕೃತ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಸಮುದಾಯ ಸಹಭಾಗಿತ್ವದಲ್ಲಿ ಯೋಜನೆ ಸಿದ್ಧಪಡಿಸುವ ಜ್ಞಾನ ಮತ್ತು ಅನುಭವ ಹೊಂದಿರಬೇಕು.
See also  ಬಳ್ಳಾರಿ DCC ಬ್ಯಾಂಕ್ ನೇಮಕಾತಿ 2026 – 82 ಹುದ್ದೆಗಳಿಗೆ Online ಅರ್ಜಿ ಸಲ್ಲಿಸಿ | ಕೊನೆ ದಿನಾಂಕ June 30 ಇಂದೇ ಅರ್ಜಿ ಸಲ್ಲಿಸಲು ಸಂಪೂರ್ಣ ಓದಿ!

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ 30 ವರ್ಷ ವಯಸ್ಸಾಗಿರಬೇಕು.

ಯುವ ವೃತ್ತಿಪರರ ಅರ್ಹತೆ (Young Professional – 02 ಹುದ್ದೆಗಳು)

ವಿದ್ಯಾರ್ಹತೆ

ಸಮಾಜ ಶಾಸ್ತ್ರ, ಸಮಾಜ ಕಾರ್ಯ, ಗ್ರಾಮೀಣಾಭಿವೃದ್ಧಿ ಅಥವಾ ಸಾರ್ವಜನಿಕ ನೀತಿ ವಿಷಯದಲ್ಲಿ ಪದವಿ ಹೊಂದಿರಬೇಕು.

ಅನುಭವ

  • ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಮಕ್ಕಳು ಮತ್ತು ಮಹಿಳೆಯರು, ವಿಶೇಷ ಚೇತನರು, ಹಿರಿಯ ನಾಗರಿಕರಿಗೆ ಸಂಬಂಧಿಸಿದ ಯಾವುದಾದರೂ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷ ಕಾರ್ಯನಿರ್ವಹಿಸಿದ ಅನುಭವ ಇರಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲು ಗರಿಷ್ಠ 35 ವರ್ಷ ವಯಸ್ಸಾಗಿರಬೇಕು.

ಇತರ ಅರ್ಹತೆಗಳು ಮತ್ತು ಕೌಶಲ್ಯಗಳು

ಎರಡೂ ಹುದ್ದೆಗಳಿಗೂ ಈ ಕೆಳಗಿನ ಸಾಮಾನ್ಯ ಅರ್ಹತೆಗಳು ಅಗತ್ಯ:

1. ಭಾಷಾ ಜ್ಞಾನ
ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಮಾತನಾಡಲು, ಓದಲು ಮತ್ತು ಬರೆಯಲು ತಿಳಿದಿರಬೇಕು. ಜೊತೆಗೆ ಇಂಗ್ಲೀಷ್ ಭಾಷೆಯ ಜ್ಞಾನ ಹೊಂದಿರಬೇಕು.

2. ಕಂಪ್ಯೂಟರ್ ಕೌಶಲ್ಯ
MS-Word, MS-Excel ಮತ್ತು MS-PowerPoint ಗಳನ್ನು ಬಳಸಲು ತಿಳಿದಿರಬೇಕು. ಕಂಪ್ಯೂಟರ್ ಜ್ಞಾನ ಮತ್ತು ಕೌಶಲ್ಯ ಅಗತ್ಯ.

3. ಪಂಚಾಯತ್ ರಾಜ್ ಜ್ಞಾನ
ಪಂಚಾಯತ್ ರಾಜ್ ವ್ಯವಸ್ಥೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಇರಬೇಕು.

4. ಕ್ಷೇತ್ರ ಕಾರ್ಯ ಸಾಮರ್ಥ್ಯ
ಕ್ಷೇತ್ರ ಮಟ್ಟದಲ್ಲಿ ಗ್ರಾಮ ಪಂಚಾಯತಿಗಳು ಮತ್ತು ಸಮುದಾಯದೊಂದಿಗೆ ಕೆಲಸ ಮಾಡಲು ಮತ್ತು ಅಗತ್ಯವಿದ್ದಲ್ಲಿ ಯಾವುದೇ ಗ್ರಾಮ ಪಂಚಾಯತಿಗೆ ಪ್ರಯಾಣಿಸಲು ಸಿದ್ಧರಿರಬೇಕು.

5. SRLG ಗುರಿ ಸಾಧನೆ
SRLG ಕೋಶದ ಗುರಿಗಳನ್ನು ಸಾಧಿಸಲು ಗ್ರಾಮ ಪಂಚಾಯತಿಗಳು ಸೇರಿದಂತೆ ವಿವಿಧ ಭಾಗೀದಾರರೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು.

ಈ ಹುದ್ದೆಗಳ ಜವಾಬ್ದಾರಿಗಳು

ವಿಷಯ ಪರಿಣಿತರ ಜವಾಬ್ದಾರಿಗಳು

  • ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರಿಗೆ ವರದಿ ಮಾಡಿಕೊಳ್ಳುವುದು ಹಾಗೂ SRLG ಕೋಶದಲ್ಲಿ ಕಾರ್ಯನಿರ್ವಹಿಸುವುದು.
  • SRLG ಪರಿಕಲ್ಪನೆ ಮತ್ತು ಗ್ರಾಮ ಪಂಚಾಯತಿಗಳಿಂದ ಅನುಸರಣೆಗೊಳಿಸಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಮಾರ್ಗಸೂಚಿಯನ್ನು ಸಿದ್ಧಪಡಿಸುವುದು.
  • SRLG ಸ್ಥಳೀಯ ಆಡಳಿತ ಕುರಿತು ಭಾಗೀದಾರರಿಗೆ ಆಯುಕ್ತಾಲಯದಿಂದ ತರಬೇತಿಗಳನ್ನು ಆಯೋಜಿಸಲು ಬೆಂಬಲಿಸುವುದು.
  • ಗ್ರಾಮ ಪಂಚಾಯತಿಗಳಿಂದ ಮಕ್ಕಳ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ, ಮಹಿಳಾ ಔರ್ಜನ್ಯ ಮುಕ್ತಿ ಅಭಿಯಾನ ಸೇರಿದಂತೆ ಇತರ ಕಾರ್ಯಕ್ರಮ/ಚಟುವಟಿಕೆಗಳ ಬಗ್ಗೆ ಕಾಲ ಕಾಲಕ್ಕೆ ಆಯುಕ್ತಾಲಯ/ಸರ್ಕಾರದಿಂದ ಸೂಚನೆ ನಿರ್ದೇಶನಗಳನ್ನು ಸಿದ್ಧಪಡಿಸುವುದು.
  • ಗ್ರಾಮ ಪಂಚಾಯತಿಗಳಿಂದ ಮಕ್ಕಳು ಮತ್ತು ಮಹಿಳೆಯರ ಗ್ರಾಮ ಸಭೆಗಳನ್ನು ಆಯೋಜಿಸಿದ ಬಗ್ಗೆ ವರದಿಗಳನ್ನು ಆಯುಕ್ತಾಲಯ/ಸರ್ಕಾರಕ್ಕೆ ಸಲ್ಲಿಸಲು ಸಂಯೋಜನೆ ಮಾಡುವುದು.
  • ಮಕ್ಕಳು, ಮಹಿಳೆಯರು, ವಿಶೇಷ ಚೇತನರು, ಹಿರಿಯ ನಾಗರಿಕರುಗಳ ಕೇಂದ್ರಿತ ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಗಳಿಂದ ಸ್ಪಂದಿಸಲು ಅಗತ್ಯವಿರುವ ತರಬೇತಿಗಳನ್ನು ANSSIRD & PR ಮತ್ತು ಇತರ ಸರ್ಕಾರಿ/ಸರ್ಕಾರೇತರ ಸಂಸ್ಥೆಗಳಿಂದ ಆಯೋಜಿಸಲು ಬೆಂಬಲಿಸುವುದು ಮತ್ತು ಸಂಯೋಜನೆ ಮಾಡುವುದು.
  • ಅರಿವು ಕೇಂದ್ರ, ಕೌಸಿನ ಮನೆ, ಹಣ ತ್ಯಾಜ್ಯ ನಿರ್ವಹಣೆ, ಗ್ರಾಮ ಆರೋಗ್ಯ ಯೋಜನೆಗಳ ಅನುಷ್ಠಾನದ ಉಸ್ತುವಾರಿ ಮತ್ತು ಮಾಹಿತಿ ನಿರ್ವಹಣೆ ಕಾರ್ಯನಿರ್ವಹಿಸುವುದು.
  • ಗ್ರಾಮ ಪಂಚಾಯತಿಗಳನ್ನು ಸಾಮಾಜಿಕವಾಗಿ ಸ್ಪಂದಿಸುವ ಸ್ಥಳೀಯ ಆಡಳಿತವನ್ನಾಗಿಸಲು ಸಮುದಾಯ ಪಾಲ್ಗೊಳ್ಳಿಸಿಕೊಳ್ಳಲು ಬೆಂಬಲಿಸುವುದು.
  • ಆಯುಕ್ತಾಲಯದಿಂದ ಪ್ರಗತಿ ಪರಿಶೀಲನಾ ಸಭೆ ಮತ್ತು ಇತರ ಸಭೆಗಳನ್ನು ಆಯೋಜಿಸಲು ಬೆಂಬಲಿಸುವುದು.
  • ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರು, ನಿರ್ದೇಶಕರು (ಅಭಿವೃದ್ಧಿ) ಇವರು ವಹಿಸುವ ಇತರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.
See also  ರಾಯಚೂರು ಜಿಲ್ಲಾ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕ ನೇಮಕಾತಿ 2026 – 13 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ | ಸಂಪೂರ್ಣ ಮಾಹಿತಿಗಾಗಿ ಓದಿ.

ಯುವ ವೃತ್ತಿಪರರ ಜವಾಬ್ದಾರಿಗಳು

  • ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಿಗೆ ವರದಿ ಮಾಡಿಕೊಳ್ಳುವುದು ಹಾಗೂ ಕೋಶದ ಕಾರ್ಯನಿರ್ವಹಣೆಗೆ ಪೂರ್ಣ ಬೆಂಬಲ ನೀಡುವುದು.
  • ಮಕ್ಕಳ ಗ್ರಾಮ ಸಭೆ ಮತ್ತು ಮಹಿಳೆಯರ ಗ್ರಾಮ ಸಭೆ, ಮಹಿಳಾ ಔರ್ಜನ್ಯ ಮುಕ್ತಿ ಅಭಿಯಾನವನ್ನು ಗ್ರಾಮ ಪಂಚಾಯತಿಗಳಿಂದ ನಡೆಸಲು ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ, ನಿರ್ದೇಶನಗಳು ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮೂಲಕ ಗ್ರಾಮ ಪಂಚಾಯತಿಗಳಿಗೆ ತಲುಪಿರುವುದನ್ನು ಮತ್ತು ಅನುಷ್ಠಾನಗೊಳಿಸುವುದನ್ನು ಖಾತರಿಪಡಿಸಿಕೊಳ್ಳುವುದು.
  • ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳೊಂದಿಗೆ ಅನುಸರಣೆ ಮಾಡಿ ಮಕ್ಕಳ ಗ್ರಾಮ ಸಭೆ ಮತ್ತು ಮಹಿಳೆಯರ ಗ್ರಾಮ ಸಭೆಯ ವರದಿಗಳನ್ನು ಹಾಗೂ ಇತರ ಅವಶ್ಯಕ ವರದಿಗಳನ್ನು ಗ್ರಾಮ ಪಂಚಾಯತಿಗಳಿಂದ P-2 ನಲ್ಲಿ ಇಂದೀಕರಿಸಿರುವುದನ್ನು ಖಾತರಿಪಡಿಸಿಕೊಳ್ಳುವುದು.
  • ಅರಿವು ಕೇಂದ್ರ, ಕೌಸಿನ ಮನೆ, ಹಣ ತ್ಯಾಜ್ಯ ನಿರ್ವಹಣೆ, ಗ್ರಾಮ ಆರೋಗ್ಯ ಅನುಷ್ಠಾನದ ಪ್ರಗತಿ ವರದಿಗಳನ್ನು ಗ್ರಾಮ ಪಂಚಾಯತಿಗಳಿಂದ P-2 ನಲ್ಲಿ ಇಂದೀಕರಿಸಿರುವುದನ್ನು ಖಾತರಿಪಡಿಸಿಕೊಳ್ಳುವುದು.
  • ಗ್ರಾಮ ಪಂಚಾಯತಿಗಳಿಂದ ಮಕ್ಕಳು, ಮಹಿಳೆಯರು ಮತ್ತು ವಿಶೇಷ ಚೇತನರಿಗಾಗಿ ಸಿದ್ಧಪಡಿಸಿದ ಆಯವ್ಯಯವನ್ನು ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತಿಗಳಿಗೆ ಬೆಂಬಲಿಸುವುದು.
  • ಕಾಲ ಕಾಲಕ್ಕೆ ಗ್ರಾಮ ಪಂಚಾಯತಿಗಳಿಂದ ನಡೆಸಲಾಗುವ ಕಾರ್ಯಕ್ರಮಗಳ ಪ್ರಗತಿಯ ವರದಿಗಳನ್ನು ಆಯಾ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳಿಂದ ಸಂಗ್ರಹಿಸಿ ಕೋಡೀಕರಿಸಿ ಆಯುಕ್ತರು ಮತ್ತು ನಿರ್ದೇಶಕರು (ಅಭಿವೃದ್ಧಿ) ಇವರಿಗೆ ಸಲ್ಲಿಸುವುದು.
  • ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರು, ನಿರ್ದೇಶಕರು (ಅಭಿವೃದ್ಧಿ), ವಿಷಯ ಪರಿಣಿತರು ಕಾಲ ಕಾಲಕ್ಕೆ ವಹಿಸುವ ಇತರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

ಆಯ್ಕೆ ವಿಧಾನ

ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಮತ್ತು ಕೌಶಲ್ಯವನ್ನು ಆಧರಿಸಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಮತ್ತು ಮೌಖಿಕ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುವುದು. ಅರ್ಜಿಯೊಂದಿಗೆ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಅಂಕಪಟ್ಟಿಗಳು, ಅನುಭವಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳು, ವಯೋಮಿತಿ ದೃಢೀಕರಿಸಲು SSLC ಅಂಕಪಟ್ಟಿ/ಸರ್ಕಾರದಿಂದ ಅನುಮೋದಿತ ಇತರ ಗುರುತಿನ ಚೀಟಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಹತೆ ಮತ್ತು ಅನುಭವಗಳಿಗೆ ಅನುಗುಣವಾಗಿ ಸ್ವ-ವಿವರಗಳನ್ನು ಒಳಗೊಂಡ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೆಳಗಿನ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು:

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ,
ಕಾಳಿದಾಸ ರಸ್ತೆ, ಗಾಂಧಿನಗರ,
ಬೆಂಗಳೂರು – 560 009

ಇಮೇಲ್ ಮೂಲಕ ಸಲ್ಲಿಸಬಯಸುವವರು: srlgrecruitment@gmail.com

ಮುಖ್ಯ ದಿನಾಂಕಗಳು

ವಿವರದಿನಾಂಕ
ಅಧಿಸೂಚನೆ ದಿನಾಂಕ27.05.2026
ಅರ್ಜಿ ಸ್ವೀಕರಣ ಪ್ರಾರಂಭ30.05.2026
ಅರ್ಜಿ ಸ್ವೀಕರಣ ಕೊನೆಯ ದಿನ06.06.2026
ಕೊನೆಯ ದಿನ ಅರ್ಜಿ ಸ್ವೀಕರಣ ಸಮಯಸಂಜೆ 5:30 ಕ್ಕೆ
ನೇಮಕ ಅವಧಿ31.03.2027 ರ ವರೆಗೆ

ಗಮನಿಸಿ: ಅಂತಿಮ ದಿನಾಂಕದ ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಈ ಹುದ್ದೆ ಯಾರಿಗೆ ಸೂಕ್ತ?

ಗ್ರಾಮೀಣ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ, ಮಕ್ಕಳ ಹಕ್ಕುಗಳು ಮತ್ತು ಸ್ಥಳೀಯ ಆಡಳಿತ ಕ್ಷೇತ್ರದಲ್ಲಿ ಆಸಕ್ತಿ ಇರುವ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಈ ಹುದ್ದೆ ಅತ್ಯಂತ ಸೂಕ್ತ. ಸರ್ಕಾರದ ನೀತಿ ಮತ್ತು ಕಾರ್ಯಕ್ರಮಗಳನ್ನು ನೇರವಾಗಿ ಜನರ ಬಳಿ ತಲುಪಿಸಲು ಆಸಕ್ತಿ ಇರುವ ಯುವ ಪದವೀಧರರಿಗೆ ಇದೊಂದು ಅಪೂರ್ವ ಅವಕಾಶ.

See also  ಕರ್ನಾಟಕ ಕೃಷಿ ಇಲಾಖೆ ನೇಮಕಾತಿ 2026 – 670+ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು | ಸಂಪೂರ್ಣ ವಿವರ,ಮಾಹಿತಿ

ಸಂಕ್ಷಿಪ್ತ ಮಾಹಿತಿ

ವಿವರಮಾಹಿತಿ
ಇಲಾಖೆಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ
ಹುದ್ದೆವಿಷಯ ಪರಿಣಿತರು (01) ಮತ್ತು ಯುವ ವೃತ್ತಿಪರರು (02)
ಒಟ್ಟು ಹುದ್ದೆಗಳು03
ನೇಮಕ ಆಧಾರಗುತ್ತಿಗೆ ಆಧಾರ
ವಿಷಯ ಪರಿಣಿತರ ಸಂಭಾವನೆ₹ 1,00,000/- ಮಾಸಿಕ
ಯುವ ವೃತ್ತಿಪರರ ಸಂಭಾವನೆ₹ 75,000/- ಮಾಸಿಕ
ಕೊನೆಯ ದಿನಾಂಕ06.06.2026
ಅರ್ಜಿ ಸ್ವೀಕರಣ ಇಮೇಲ್srlgrecruitment@gmail.com

ಸಂಪಾದರ ಮಾತು

ಕರ್ನಾಟಕ ಸರ್ಕಾರದ ಪಂಚಾಯತ್ ರಾಜ್ ಆಯುಕ್ತಾಲಯದ ಈ ನೇಮಕಾತಿ ಅಧಿಸೂಚನೆ ಗ್ರಾಮೀಣ ಅಭಿವೃದ್ಧಿ ಮತ್ತು ಸ್ಥಳೀಯ ಆಡಳಿತ ಕ್ಷೇತ್ರದಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಒಳ್ಳೆಯ ಅವಕಾಶ. ತಿಂಗಳಿಗೆ ₹75,000 ರಿಂದ ₹1,00,000 ವರೆಗೆ ಸಂಭಾವನೆ ಇರುವ ಈ ಹುದ್ದೆಗಳು ಸ್ಥಳೀಯ ಆಡಳಿತ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಅನುಭವಿ ಮತ್ತು ಯುವ ಅಭ್ಯರ್ಥಿಗಳಿಗೆ ಸದವಕಾಶ. ಆದ್ದರಿಂದ ಅರ್ಹ ಅಭ್ಯರ್ಥಿಗಳು 06.06.2026 ರ ಒಳಗಾಗಿ ಅರ್ಜಿ ಸಲ್ಲಿಸಿ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಿ.

Disclaimer

ಈ ನಮ್ಮ gpaskannada.in ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಸಾರ್ವಜನಿಕ ಅರಿವುಗಾಗಿ ಮಾತ್ರ ನೀಡಲಾಗಿದೆ. ಇಲ್ಲಿ ನೀಡಿರುವ ಮಾಹಿತಿಯು ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆಗಳಿಂದ ಸಂಗ್ರಹಿತ ಸಾಮಾನ್ಯ ಮಾಹಿತಿಯಾಗಿರಬಹುದು.

ನಾವು ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ನೀಡಲು ಪ್ರಯತ್ನಿಸುತ್ತೇವೆ, ಆದರೆ ಯಾವುದೇ ತಪ್ಪು ಅಥವಾ ಬದಲಾವಣೆಗಳಿಗಾಗಿ ನಾವು ಹೊಣೆಗಾರರಾಗಿರುವುದಿಲ್ಲ. ಬಳಕೆದಾರರು ಅರ್ಜಿ ಸಲ್ಲಿಸುವ ಮೊದಲು ಸಂಬಂಧಿಸಿದ ಅಧಿಕೃತ ವೆಬ್‌ಸೈಟ್ ಅಥವಾ ಸರ್ಕಾರದ ಕಚೇರಿಯನ್ನು ಸಂಪರ್ಕಿಸಿ ಪರಿಶೀಲಿಸಬೇಕು.

ಈ ವೆಬ್‌ಸೈಟ್ ಯಾವುದೇ ಸರ್ಕಾರಿ ಸಂಸ್ಥೆಯ ಅಧಿಕೃತ ಪ್ರತಿನಿಧಿಯಲ್ಲ.

ಹೊಸ ಸರ್ಕಾರಿ ಅಪ್ಡೇಟ್ಸ್‌ಗಾಗಿ ನಮ್ಮ ಜೊತೆ ಇರಿ

ಹೊಸ ಸರ್ಕಾರಿ ಅಪ್ಡೇಟ್ಸ್‌ಗಾಗಿ ನಮ್ಮ ಜೊತೆ ಇರಿ

ಈಗಲೇ Join ಆಗಿ— ಇಲ್ಲದಿದ್ದರೆ ಪ್ರಮುಖ ಮಾಹಿತಿ ತಪ್ಪಿಸಿಕೊಳ್ಳುತ್ತೀರಾ